news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Sunday, 5 June 2022

ಶಾಲಾ ಪ್ರವೇಶೋತ್ಸವ 2022-2023 ಶ್ರೀ ದುರ್ಗಾಪರಮೇಶ್ವರೀ ಎ.ಯು.ಪಿ ಶಾಲೆ ಸಜಂಕಿಲ ಇದರ ಶಾಲಾ ಪ್ರವೇಶೋತ್ಸವವು ದಿನಾಂಕ01.06.2022 ನೇ ಬುಧವಾರ ಬಹಳ ಸಂಭ್ರಮದಿಂದ ಜರಗಿತು.2022-23ನೇ ಅಧ್ಯಯನ ವರ್ಷಕ್ಕೆ ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಅಧ್ಯಾಪಕರು,ರಕ್ಷಕ ಶಿಕ್ಷಕ ಸಂಘದ ಸದಸ್ಯರು,ಪಂಚಾಯತು ಸದಸ್ಯರು ಹಾಗೂ ಊರ ಮಹನೀಯರೆಲ್ಲರೂ ಸೇರಿ ಸ್ವಾಗತಿಸಿದೆವು. ಸಭಾಕಾರ್ಯಕ್ರಮವು ಬೆಳಗ್ಗೆ 10 ಗಂಟೆಗೆ ಸರಿಯಾಗಿ ಆರಂಭಗೊಂಡಿತು.ಶ್ರೀಮತಿ ಚಂದ್ರಾವತಿ,ಸುಮಿತ್ರ ಹಾಗೂ ರಜನಿ ಟೀಚರರ ಬಳಗದವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು PTAPRESIDENT SRI GOPALAKRISHNA.BHAT.S ವಹಿಸಿ ಶುಭಕೋರಿದರು.PAIVALIKE PANCHAYATH WARD MEMBER SMT.GEETHA.GUMPE.ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ದರು.SCHOOLMANAGER SRI BHAT K.ಶುಭಾಶಂಸನೆಗೆೃದರು.ಹೊಸದಾಗಿ ಸೇರಿದ ಎಲ್ಲಾ ಮಕ್ಕಳಿಗೆ ಶಾಲೆಯವತಿಯಿಂದ ಕಲಿಕೋಪಕರಣಗಳನ್ನು ವಿತರಿಸಲಾಯಿತು.ಪ್ರವೇಶೋತ್ಸವ ಗೀತೆಯನ್ನುಮಕ್ಕಳಲ್ಲಿ ಹಾಡಿಸಲಾಯಿತಿ.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಧರ ಭಟ್ ಸ್ವಾಗತಿಸಿ ಪ್ರದೀಪ್ ಕುಮಾರ್ ಧನ್ಯವಾದವಿತ್ತರು.ಅಧ್ಯಾಪಕರಾದ.ಶ್ರೀರಾಮ ಕೆದುಕೋಡಿ ಕಾರ್ಯಕ್ರಮ ನಿರೂಪಿಸಿದರು. MASTER PLAN ಮಂಡನೆಯ ಕಾರ್ಯಕ್ರಮ ಹೆತ್ತವರ ಸಹಭಾಗಿತ್ವದೊಂದಿಗೆ ಜರಗಿತು. ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಸಿಹಿ ತಿಂಡಿಯೊಂದಿಗೆ ಪಾನೀಯವನ್ನೂ ವಿತರಿಸಲಾಯಿತು.ಮಧ್ಯಾಹ್ನ ಪಾಯಸಾದಿ ವಿಭವಗಳಿಂದ ಕೂಡಿದ ರುಚಿಯಾದ ಭೋಜನದವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಉತ್ಸವದ ಮೆರಗನ್ನು ಹೆಚ್ಚಿಸಿತು.

Thursday, 28 January 2021

ಮನೆ ಸಂದರ್ಶನ

 ONLINE ತರಗತಿ ಹಾಗೂ ವಿದ್ಯಾ ರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿಸುವ ಉದ್ದೇಶದಲ್ಲಿ ನಮ್ಮ ಶಾಲಾ ಎಲ್ಲಾ ವಿದ್ಯಾರ್ಥಿಗಳ ಮನೆಗೂ ಸಂದರ್ಶನ ಮಾಡಲಾಯಿತು.ತರಗತಿ ವೀಕ್ಷಣೆಯ ಬಗ್ಗೆ ವಿಚಾರಿಸುವುದರೊಂದಿಗೆ ಮಕ್ಕಳ ಸಂಶಯ ನಿವಾರಣೆ ಮಾಡಲಾಯಿತು.















ಈ ವರ್ಷ ನಮ್ಮ ಶಾಲಾ ಪ್ರಜಾಪ್ರಭುತ್ವ ದಿನಾಚರಣೆಯು ಬಹಳ ಸರಳ ವಾಗಿ ಆಚರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ. ಶ್ರೀಧರ.ಭಟ್.ಧ್ವಜಾರೋಹಣ ಮಾಡಿದರು.ಪಿ.ಟಿ.ಎ.ಅಧ್ಯಕ್ಷರಾದ ಶ್ರೀ.ರವೀಂದ್ರ ಹಾಗೂ ವಾರ್ಡ್ ನ ಪಂಚಾಯತು ಸದಸ್ಯರಾದ ಶ್ರೀಮತಿ ಗೀತಾರವರು ಉಪಸ್ಥಿತರಿದ್ದು ಶುಭಕೋರಿದರು.

Tuesday, 7 February 2017

                             ಶಾಲಾ ವಾರ್ಷಿಕೋತ್ಸವಕ್ಕೆ ಸ್ವಾಗತ


Thursday, 30 July 2015








ಗಣಿತ ಕ್ಲಬ್ಬಿನ ಆಶ್ರಯದಲ್ಲಿ
ಚಾರ್ಟ್ ಹಾಗೂ ಮೋಡೆೆಲ್ ಪ್ರದರ್ಶನ

ಶಾಲಾಗಣಿತ ಕ್ಲಬ್ಬಿನ ಆಶ್ರಯದಲ್ಲಿ ಗಣಿತ ಚಾರ್ಟ್ ಹಾಗೂ ಮೋಡೆಲ್ ಗಳ ಪ್ರದರ್ಶನ ಜರಗಿತು.ಗಣಿತ ಮೇಳದಲ್ಲಿ ಮಕ್ಕಳು ಭಾಗವಹಿಸಲು ಪ್ರೇರಣೆ ನೀಡುವ ಉದ್ದೇಶದಿಂದ ಇದನ್ನು ಆಯೋಜಿಸಲಾಯಿತು.ಮಕ್ಕಳ ಉತ್ಪನ್ನಗಳು ಆಕರ್ಷಕವಾಗಿದ್ದವು