news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Wednesday 27 August 2014

SCHOOL VEGETABLE GARDEN


TRAINING FOR VEGETABLE CULTIVATION
ECO-CLUB STUDENTS ,SDPAUPS SAJANKILA
ತಾ.27-8-2014 ರಂದು 11 ಗಂ.ಗೆ ಶಾಲಾ ತರಕಾರಿ ತೋಟ ನಿರ್ಮಾಣದ ಪೂರ್ವಭಾವಿಯಾಗಿ ECO-CLUB ನ ಸದಸ್ಯರಿಗೆ ವಿಶೇಷ ತರಬೇತಿಯನ್ನು ಏರ್ಪಡಿಸಲಾಯಿತು.ಪೈವಳಿಕೆ ಕೃಷಿಭವನದ ಕೃಷಿ ಅಧಿಕಾರಿಯಾದ ಶ್ರೀ ದೇವರಾಜ ಹಾಗೂ ನಿವೃತ್ತ ಕೃಷಿ ಅಧಿಕಾರಿಯಾಗಿರುವ ಶ್ರೀ.ಕೇಶವ ತರಗತಿಯನ್ನು ನಡೆಸಿ ಕೊಟ್ಟರು.ತರಕಾರಿ ಕೃಷಿಗೆ ಅಗತ್ಯವಾದ ಮಣ್ಣು,ಬೀಜಗಳ ಆಯ್ಕೆ,ಸಸಿ ತಯಾರಿ,ಕೀಟ ನಿಯಂತ್ರಣ,ರೋಗ ನಿಯಂತ್ರಣ ಮುಂತಾದ ವಿಷಯಗಳ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು.ಜೈವಿಕ ಕೀಟನಾಶಕ ತಯಾರಿಸುವ ವಿಧಾನವನ್ನೂ ವಿವರಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಕಾಂತ.ವಿ.ಸ್ವಾಗತಿಸಿ ಶ್ರೀಧರ.ಭಟ್.ವಂದಿಸಿದರು.

TRAINING FOR VEGETABLE CULTIVATION

ತರಬೇತಿ




Thursday 21 August 2014

SCHOOL LVEL MATHS QUIZ COMPETETION



ಶಾಲಾ ಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆಯು ತಾ .21-8-2014 ರಂದು ಜರಗಿತು.ಯು.ಪಿ.ವಿಭಾಗದಲ್ಲಿ ಕೃಷ್ಣಶರ್ಮ.ಯಂ.ಪ್ರಥಮ ಸ್ಥಾನವನ್ನು ಪಡೆದನು.ವಿಶ್ವಜಿತ್.ಕೆ.ದ್ವಿತೀಯ ಸ್ಥಾನಕ್ಕೆ ಅರ್ಹನಾದನು.

Sunday 17 August 2014


ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನವು ಬಹಳ ಅದ್ದೂರಿಯಾಗಿ ನಡೆಯಿತು. 10.ಗಂಟೆಗೆ ಸರಿಯಾಗಿ ವಾರ್ಡ್ ಸದಸ್ಯರಾದ ಶ್ರೀಮತಿ ಜಯಲಕ್ಷ್ಮಿ.ಭಟ್.ಧ್ವಜಾರೋಹಣ ಮಾಡಿದರು.ಅನಂತರ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಿ.ಟಿ..

ಅಧ್ಯಕ್ಷರಾದ ರವೀಶ್.ಭಟ್.ಅಲಂಕರಿಸಿದರು.ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ವಾಸುದೇವ.ಭಟ್.[ಶಿವ.ಪಡ್ರೆ.] ಭಾಗವಹಿಸಿದರು.ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಭಾಷಣ,ದೇಶಭಕ್ತಿಗೀತೆ ಸ್ಪರ್ಧೆ ನಡೆಸಲಾಗಿತ್ತು.ವಿಜೇತರಾಶ್ರೀದೇವಿ,ಕೃಷ್ಣಶರ್ಮ,ವಿಶ್ವಜಿತ್,ಪುನೀತ್,ಶರಣ್ಯ,ಚೈತ್ರಿಕ,ಮುಂತಾದವ
ರಿಗೆ ಅತಿಥಿಗಳು ಬಹುಮಾನ ವಿತರಿಸಿದರು.ತಲೆಂಗಳ ಈಶ್ವರ.ಭಟ್.ಅವರ ಸ್ಮರಣಾರ್ಥ ನೀಡಿದ ಮೊತ್ತದಿಂದ ಖರೀದಿಸಲಾದ ಲ್ಯಾಪ್ ಟಾಪನ್ನು ಅತಿಥಿಗಳು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.M.P.T.A.ಅಧ್ಯಕ್ಷೆ ಶ್ರೀಮತಿ ಸೀತಾ.ಪಂಜ.ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ ವಿ.ಶ್ರೀಕಾಂತ.ಸ್ವಾಗತಿಸಿ ಅಧ್ಯಾಪಕರಾದ ರಮಾನಂದ.ಕೆ ವಂದಿಸಿದರು.ಶ್ರೀರಾಮ ಕೆದುಕೋಡಿ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗಾಗಿ ದೇಶಭಕ್ತಿಗೀತೆ ಸ್ಪರ್ಧೆ,ಹಗ್ಗಜಗ್ಗಾಟ ಸ್ಪರ್ಧೆ ಜರಗಿತು.ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಬಳಿಕ ಯುವ ಕರಾಡ ಕನಿಯಾಲ ಇವರ ಪ್ರಾಯೋಜಕತ್ವದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಸಸಿ ವಿತರಣೆ ನಡೆಯಿತು.
ಮಧ್ಯಾಹ್ನ ಊರವರ ಸಹಕಾರದೊಂದಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಭೋಜನದ ಬಳಿಕ ಮಹಿಳೆಯರಿಗಾಗಿ ಸಂಗೀತ ಕುರ್ಚಿ ಸ್ಪರ್ಧೆಯೂ ನಡೆಯಿತು.ವಿಜೇತರಿಗೆ ರವೀಶ್.ಭಟ್.ಬಹುಮಾನ ವಿತರಿಸಿದರು.









ಸ್ವಾತಂತ್ರ್ಯ ದಿನಾಚರಣೆ


ಸ್ವಾತಂತ್ರ್ಯ ದಿನಾಚರಣೆ























Sunday 10 August 2014


ಶಾಲಾ ಪಿ.ಟಿ..ಕಾರ್ಯಕಾರಿ ಸಮಿತಿಯ ವಿಶೇಷ ಸಭೆ.

ತಾ-6-8-2014 ರಂದು ಗಂ.4.30.ಕ್ಕೆ ಶಾಲಾ ಪಿ.ಟಿ ಎ.ಕಾರ್ಯಕಾರಿ ಸಮಿತಿ ಸಭೆ ಸೇರಿ ಸ್ವಾತಂತ್ರ್ಯ ದಿನ ಹಾಗೂ ಶಾಲಾ ಆಟದ ಬಯಲಿನ ವಿಸ್ತರಣೆಯ ಬಗ್ಗೆ ಚರ್ಚಿಸಿದರು. ಸ್ವಾತಂತ್ರ್ಯ ದಿನಾಚರಣೆಯನ್ನು ಅನೇಕ ಸ್ಪರ್ಧೆಗಳೊಂದಿಗೆ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡಸಲು
ತೀರ್ಮಾನಿಸಲಾಯಿತು.ಅಟದ ಬಯಲಿನ ಕಾಮಗಾರಿಯನ್ನು ಶೀಘ್ರವೇ ಕೈಗೆತ್ತಿಕೊಂಡು
ಪೂರ್ಣಗೊಳಿಸುವ ನಿರ್ಧಾರವನ್ನು ಕೈಗೊಂಡರು.






Friday 8 August 2014

       

                      SAKSHARAM-2014




MORNING


9.45.am
to
12.45.pm
SAKSHARAM CLASS


1.15 pm
to
2.15pm
AFTERNOON


2.15pm
to
4.15 pm



Class charge;
1.Sreerama kedukody            .2.Smt.M.Vasanthi.



ಸಾಕ್ಷರಂ ..2014

Add caption

 ದೀಪ ಬೆಳಗಿಸುವುದು.

ಸಾಕ್ಷರಂ-2014  ಉದ್ಘಾಟನಾ ಸಮಾರಂಭ

        ಸಾಕ್ಷರ-2014 ಇದರ ಶಾಲಾ ಮಟ್ಟದ ಉದ್ಘಾಟನಾ ಸಮಾ

ರಂಭವು ತಾ.6-8-14 ನೇ ಬುಧವಾರ ಗಂಟೆ.3 ಕ್ಕೆ ನೆರವೇರಿತು.ಪಿ.ಟಿ.ಎ.ಅಧ್ಯಕ್ಷರಾದ ರವೀಶ್. ಭಟ್ .ಎ ಸಮಾರಂಭದ
ಅಧ್ಯಕ್ಷತೆಯನ್ನು ವಹಿಸಿದರು.ವಾರ್ಡ್ ಸದಸ್ಯರಾದ ಶ್ರೀಮತಿ ಜಯಲಕ್ಷ್ಮಿ .ಭಾಟ್.ಉದ್ಘಾಟಿಸಿದರು.ಶಾಲಾ ಮುಖ್ಯೋಪಾಧ್ಯಾಯರಾದ ವಿ.ಶ್ರೀಕಾಂತ. ಸ್ವಾಗತಿಸಿ ಶ್ರೀರಾಮ ಕೆದುಕೋಡಿ ವಂದಿಸಿದರು.M.P.T.A ಅಧ್ಯಕ್ಷೆ ಶ್ರೀಮತಿ ಸೀತಾ ಉಪಸ್ಥಿತರಿದ್ದರು.

ಶಾಲೆಗೆ ಅರ್ಥಿಕ ಸಹಾಯ


 ಇತ್ತೀಚೆಗೆ ನಿಧನಗೊಂಡ ಈಶ್ವರಭಟ್.ತಲೆಂಗಳ ಇವರ ಸ್ಮರಣಾರ್ಥ ಇವರ ಪುತ್ರಿಯರಾದ  ಶ್ರೀಮತಿ.ಡಾ.ಶೈಲಾ.ಟಿ.ಭಟ್.ಹಾಗೂ ಶೋಭಾ.ಟಿ.ಭಟ್. ನಮ್ಮ ಶಾಲೆಯ ಅಭಿವೃಧ್ಧಿಗಾಗಿ ರೂ.20000 ನಗದು ದೇಣಿಗೆ ನೀಡಿರುತ್ತಾರೆ.