news

ಮನೆಯಲ್ಲಿನ ಹೆತ್ತವರು ಹಾಗೂ ಮಕ್ಕಳು ಅದ್ಯಾಪಪಕರನ್ನು ಹಾರ್ದಿಕವಾಗಿ ಸ್ವಾಗತಿಸಿದರು

Sunday, 17 August 2014


ನಮ್ಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನವು ಬಹಳ ಅದ್ದೂರಿಯಾಗಿ ನಡೆಯಿತು. 10.ಗಂಟೆಗೆ ಸರಿಯಾಗಿ ವಾರ್ಡ್ ಸದಸ್ಯರಾದ ಶ್ರೀಮತಿ ಜಯಲಕ್ಷ್ಮಿ.ಭಟ್.ಧ್ವಜಾರೋಹಣ ಮಾಡಿದರು.ಅನಂತರ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಪಿ.ಟಿ..

ಅಧ್ಯಕ್ಷರಾದ ರವೀಶ್.ಭಟ್.ಅಲಂಕರಿಸಿದರು.ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ವಾಸುದೇವ.ಭಟ್.[ಶಿವ.ಪಡ್ರೆ.] ಭಾಗವಹಿಸಿದರು.ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಭಾಷಣ,ದೇಶಭಕ್ತಿಗೀತೆ ಸ್ಪರ್ಧೆ ನಡೆಸಲಾಗಿತ್ತು.ವಿಜೇತರಾಶ್ರೀದೇವಿ,ಕೃಷ್ಣಶರ್ಮ,ವಿಶ್ವಜಿತ್,ಪುನೀತ್,ಶರಣ್ಯ,ಚೈತ್ರಿಕ,ಮುಂತಾದವ
ರಿಗೆ ಅತಿಥಿಗಳು ಬಹುಮಾನ ವಿತರಿಸಿದರು.ತಲೆಂಗಳ ಈಶ್ವರ.ಭಟ್.ಅವರ ಸ್ಮರಣಾರ್ಥ ನೀಡಿದ ಮೊತ್ತದಿಂದ ಖರೀದಿಸಲಾದ ಲ್ಯಾಪ್ ಟಾಪನ್ನು ಅತಿಥಿಗಳು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿದರು.M.P.T.A.ಅಧ್ಯಕ್ಷೆ ಶ್ರೀಮತಿ ಸೀತಾ.ಪಂಜ.ಉಪಸ್ಥಿತರಿದ್ದರು.ಶಾಲಾ ಮುಖ್ಯೋಪಾಧ್ಯಾಯರಾದ ವಿ.ಶ್ರೀಕಾಂತ.ಸ್ವಾಗತಿಸಿ ಅಧ್ಯಾಪಕರಾದ ರಮಾನಂದ.ಕೆ ವಂದಿಸಿದರು.ಶ್ರೀರಾಮ ಕೆದುಕೋಡಿ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕರಿಗಾಗಿ ದೇಶಭಕ್ತಿಗೀತೆ ಸ್ಪರ್ಧೆ,ಹಗ್ಗಜಗ್ಗಾಟ ಸ್ಪರ್ಧೆ ಜರಗಿತು.ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಬಳಿಕ ಯುವ ಕರಾಡ ಕನಿಯಾಲ ಇವರ ಪ್ರಾಯೋಜಕತ್ವದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಸಸಿ ವಿತರಣೆ ನಡೆಯಿತು.
ಮಧ್ಯಾಹ್ನ ಊರವರ ಸಹಕಾರದೊಂದಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಭೋಜನದ ಬಳಿಕ ಮಹಿಳೆಯರಿಗಾಗಿ ಸಂಗೀತ ಕುರ್ಚಿ ಸ್ಪರ್ಧೆಯೂ ನಡೆಯಿತು.ವಿಜೇತರಿಗೆ ರವೀಶ್.ಭಟ್.ಬಹುಮಾನ ವಿತರಿಸಿದರು.




No comments:

Post a Comment